ಬಾಲಕಿ ಅತ್ಯಾಚಾರ: ಅಂಗಡಿ ಮಾಲೀಕನ ಸೆರೆ

ಕುಂದಾಪುರ: ಎಂಟು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ ಅತ್ಯಂತ ಹೇಯ ಘಟನೆಯೊಂದು ತಾಲೂಕಿನ ಬಿದ್ಕಲ್‌ಕಟ್ಟೆ ಎಂಬಲ್ಲಿ ವರದಿಯಾಗಿದೆ. ಬಾಲಕಿ ಇದೀಗ ಮಣಿಪಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆಂದು ತಿಳಿದುಬಂದಿದೆ.






ಬಿದ್ಕಲ್‌ಕಟ್ಟೆ ಪೇಟೆ ಸಮೀಪ ಅಂಗಡಿ ಹೊಂದಿದ್ದ ರಾಮದಾಸ್ ಪ್ರಭು(53) ಎಂಬಾತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ. ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬದವರು ಮೂಲತಃ ತಮಿಳುನಾಡಿನವರು. ಸದ್ಯ ಆಕೆಯ ತಂದೆ ಬಿದ್ಕಲ್‌ಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಕುಟುಂಬ ಬಿದ್ಕಲ್‌ಕಟ್ಟೆಯಲ್ಲೇ ನೆಲೆಸಿದೆ.

ಚಾಕಲೇಟು ಆಸೆ ತೋರಿಸಿ ಅತ್ಯಾಚಾರವೆಸಗಿದ್ದ
ಒಂದೆರಡು ದಿನಗಳ ಹಿಂದೆ ಬಾಲಕಿ ಅಂಗಡಿಗೆ ಹೋಗಿದ್ದ ಸಂದರ್ಭದಲ್ಲಿ ಕಾಮುಕ ರಾಮದಾಸ್ ಬಾಲಕಿಯನ್ನು ಬೆದರಿಸಿ ನೀಚ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ವಿಷಯ ಯಾರಿಗೂ ಹೇಳಬೇಡ ಎಂದು ಬಾಲಕಿಗೆ ಬೆದರಿಸಿದ್ದಾನೆ. ಕಾಮುಕ ರಾಮದಾಸನ ಬೆದರಿಕೆಗೆ ಬೆದರಿದ ಬಾಲಕಿ ಮನೆಯಲ್ಲೂ ಈ ವಿಚಾರ ತಿಳಿಸಿಲ್ಲ.

ತಾಯಿಗೆ ಮಾತು ಬರುತ್ತಿರಲಿಲ್ಲ
ಎರಡು ದಿನಗಳ ಬಳಿಕ ಅತ್ಯಾಚಾರಕ್ಕೊಳಗಾದ ಬಾಲಕಿಯ ಏರೋಗ್ಯದಲ್ಲಿ ಏರುಪೇರಾಗಿದ್ದು, ತಾಯಿಗೆ ಮಾತು ಬಾರದ ಕಾರಣ ಬಾಲಕಿಗೆ ಹೇಳಲಾಗಲಿಲ್ಲ. ಬಾಲಕಿಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗಿದ್ದರಿಂದ ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.

ಮಾಧ್ಯಮದವರಿಗೆ ಮಾಹಿತಿ ನಿರಾಕರಣೆ
ಪ್ರಕರಣ ನಡೆದು ಸಾಕಷ್ಟು ಗಂಟೆ ಕಳೆದರೂ ಮಾಧ್ಯಮದವರು ಪೊಲೀಸರನ್ನು ಸಂಪರ್ಕಿಸಿದರೆ ಮಾಹಿತಿಯನ್ನು ನಿರಾಕರಿಸಿದ್ದಾರೆ. ಕೋಟ ಠಾಣೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೂ ಕೂಡ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಪ್ರಕರಣದ ಕುರಿತು ಏನೂ ಗೊತ್ತಿಲ್ಲವೆಂಬಂತೆ ಪೊಲೀಸರು ವರ್ತಿಸುತ್ತಿರುವುದು ಗಮನಾರ್ಹವಾಗಿದೆ.

ಸದ್ಯ ಆರೋಪಿಯನ್ನು ಕೋಟ ಪೊಲೀಸರು ಸೆರೆ ಹಿಡಿದಿದ್ದು, ತನಿಖೆ ನಡೆಸುತ್ತಿದ್ದಾರೆ.

Source : Karavali Karnataka

Admin

No comments:

Post a Comment

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Gangolli News will not be responsible for any defamatory message posted under this article.
Similarly, Gangolli News reserves the right to edit / block / delete the messages without notice any content received from readers.