ಮಂಗಳೂರು: ದ್ವಿ ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ 4 ಮಂದಿ ಸೆರೆ

ಮಂಗಳೂರು: ಮಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿ ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ 4 ಮಂದಿಯನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳಿಂದ 7 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಕದ್ರಿ ಶಿವಬಾಗ್ ಕ್ರಾಸ್ ರಸ್ತೆ ನಿವಾಸಿ ಅಫ್ರಿಮ್ ಶಿಯಾದ್ (20), ಕಾಟಿಪಳ್ಳ ನಿವಾಸಿ ಹಂಝ (19), ಬಾಲಸುಬ್ರಹ್ಮಣ್ಯ (37), ಫರಂಗಿಪೇಟೆ ನಿವಾಸಿ ಕಾರ್ತಿಕ್ ಸುವರ್ಣ (20) ಎಂದು ಗುರುತಿಸಲಾಗಿದೆ.

ಪೋಲಿಸ್ ಮೂಲಗಳ ಪ್ರಕಾರ ಡಿಸೆಂಬರ್ 23 ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಿಶೂಲೇಶ್ವರ ದೇವಸ್ಥಾನದ ಬಳಿಯಲ್ಲಿ ನೊಂದಾಣೆ ಸಂಖ್ಯೆಯಿರದ ರೋಯಲ್ ಎನ್ ಫೀಲ್ಡ್ ದ್ವಿಚಕ್ರ ವಾಹನದೊಂದಿಗೆ ಅನುಮಾನಸ್ಪದ ರೀತಿಯಲ್ಲಿದ್ದ ನಾಲ್ಕು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರು ಈ ಹಿಂದೆ ಕಳವುಗೈದ ಒಟ್ಟು 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದ್ವಿಚಕ್ರವಾಹನಗಳ ಪೈಕಿ ರೋಯಲ್ ಎನ್ ಫೀಲ್ಡ್ ಬುಲೆಟ್-1, ಯಮಹಾ ಫ್ ಝೆಡ್-3, ಹೀರೋ ಹೊಂಡಾ ಸ್ಲ್ಪೆಂಡರ್-1,, ಯಮಹಾ-1 ಹಾಗೂ ಒಂದು ಅಕ್ಟಿವಾ ಹೊಂಡಾ ಆಗಿರುತ್ತದೆ. ಒಂದು ರೋಯಲ್ ಎನ್ ಫೀಲ್ಡ್ ಬುಲೆಟ್, ಹಾಗೂ ಯಮಹಾ ಎಫ್ ಝೆಡ್ ಬೈಕ್ ನ್ನು ಸುಮಾರು 10 ದಿನಗಳ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರ್ ಹಾಗೂ ಮೇರ್ಲಪದವುನಿಂದ ಹಾಗೂ ಇತರ ಬೈಕ್ ಗಳನ್ನು ಮಂಗಳೂರು ನಗರದ ವಿವಿಧ ಕಡೆಗಳಿಂದ ಕಳವು ಮಾಡಿರುವುದಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ 7 ದ್ವಿಚಕ್ರ ವಾಹನಗಳ ಹಾಗೂ 5 ಮೊಬೈಲ್ ಫೋನ್ ಗಳ ಒಟ್ಟು ಮೌಲ್ಯ ರೂ. 4,67,000/- ಆಗಿರುತ್ತದೆ.
ಆರೋಪಿಗಳ ಪೈಕಿ ಅಫ್ರಿಮ್ ಶಿಯಾದ್ ಎಂಬಾತನು ಈ ಹಿಂದೆ 2015 ನೇ ಇಸವಿಯಲ್ಲಿ ಬೈಕ್ ಕಳವು, ಸರಕಳ್ಳತನ ಮುಂತಾದ 20 ಪ್ರಕರಣಗಳಲ್ಲಿ ಭಾಗಿಯಾಗಿದ್ದವನನ್ನು 2015 ನೇ ಇಸವಿಯಲ್ಲಿ ಸಿಸಿಬಿ ಪೊಲೀಸರು ದಸ್ತಗಿರಿ ಮಾಡಲಾಗಿದ್ದು, ಈಗ ಸುಮಾರು 10 ತಿಂಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಂದು ಪುನಃ ಇದೇ ರೀತಿಯಲ್ಲಿ ಬೈಕ್ ಕಳ್ಳತನದಲ್ಲಿ ಭಾಗಿಯಾಗಿರುತ್ತಾನೆ. ಆರೋಪಿ ಹಂಝ ಎಂಬಾತನು ಈ ಹಿಂದೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದನು. ಅಲ್ಲದೇ ಈ ಹಿಂದೆ ಈತನ ವಿರುದ್ಧ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ನಡೆಸಿದ ಪ್ರಕರಣ ಹಾಗೂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಬೈಕ್ ಕಳ್ಳತನ ಪ್ರಕರಣದಲ್ಲಿ ದಸ್ತಗಿರಿಯಾಗಿದ್ದವನು ಸುಮಾರು 2 ವಾರದ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದನು. ಇನ್ನೋರ್ವ ಆರೋಪಿ ಬಾಲಸುಬ್ರಮಣ್ಯ ಎಂಬಾತನ ವಿರುದ್ಧ ಬಜ್ಪೆ, ಮಂಗಳೂರು ಉತ್ತರ, ಮಂಗಳೂರು ಪೂರ್ವ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 6 ಮನೆ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Source - Mangalorean

Admin

No comments:

Post a Comment

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Gangolli News will not be responsible for any defamatory message posted under this article.
Similarly, Gangolli News reserves the right to edit / block / delete the messages without notice any content received from readers.